ಸವಿ ಮಾದಪ್ಪ ಮರಣೋತ್ತರ ಪರೀಕ್ಷಾ ವರದಿ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಮನಗರ ಎಸ್‌ಪಿ, ತಾತ್ಕಾಲಿಕ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳುತ್ತಿದೆ. ಆದರೆ ಇದು ಪೂರ್ಣವಾದ ವರದಿಯಲ್ಲ. ನಟಿಯ ದೇಹದ ಒಳಗೆ ಇನ್ನಾವುದೇ ವಿಷಕಾರಿ ಅಂಶಗಳು ಸೇರಿವೆಯೇ ಎಂಬುದನ್ನು ಎಫ್‌ಎಸ್‌ಎಲ್ ವರದಿ ಮುಖಾಂತರ ಖಚಿತಪಡಿಸಿಕೊಳ್ಳಬೇಕಾಗಿದ್ದು, ನಟಿಯ ಮೃತ ದೇಹದ ಕೆಲವು ಭಾಗಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಇನ್ನಷ್ಟು ವಿಷಯ ಖಾತ್ರಿಯಾಗಲಿವೆ. ಎಫ್‌ಎಸ್‌ಎಲ್ ವರದಿ ಬರಲು ಇನ್ನೂ ಎರಡು ತಿಂಗಳಾಗಬಹುದು ಎಂದಿದ್ದಾರೆ
Ramanagara police Superintendent S Girish talks about actress Savi Madappa's case. He said initial postmortem report arrived but waiting for FSL report to come