Andy Hits Back At Kavitha Gowda; Says She Is Frustrated For Losing Bigg Boss Title

PublicTVMusic 2021-07-06

Views 1

#Andy Hits Back At #KavithaGowda reacting to her complaint against him. Andy Says She Is Frustrated For Losing #BiggBoss Title.

Serial artist and Bigg Boss Kannada Season 6 contestant Kavitha Gowda had filed a complaint with Karnataka State Commission for Women against her co contestant Andy alias Andrew. Kavitha has alleged Andy Physically and mentally tortured her in the reality show and also outside the show.

ಬೆಂಗಳೂರು: ಬಿಗ್ ಬಾಸ್ ಸೀಸನ್- 6ರ ಸ್ಪರ್ಧಿ ಕವಿತಾ ಗೌಡ ಅವರು ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಆ್ಯಂಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾನು ಕವಿತಾ ಅವರನ್ನು ಭೇಟಿ ಮಾಡಿಲ್ಲ, ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ. ಇದುವರೆಗೂ ನಾನು ಅವರಿಗೆ ಮೆಸೇಜ್ ಕೂಡ ಮಾಡಿಲ್ಲ ಹಾಗೂ ಅವರ ಸಂಪರ್ಕದಲ್ಲೇ ಇಲ್ಲ. ಬೆಳಗ್ಗೆಯಿಂದ ನನಗೆ ಸುಮಾರು ಕರೆ ಬಂದಿದೆ. ಆದರೆ ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ. ಅವರು ಏನೂ ದೂರು ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಆ್ಯಂಡಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲೂ ಒಬ್ಬನೇ ಇದ್ದೆ. ಈಗ ಕೂಡ ಒಬ್ಬನೇ ಇದ್ದೀನಿ. ಬಿಗ್ ಬಾಸ್ ಮನೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಟಾಸ್ಕ್‍ಗಾಗಿ ನಾನು ಕವಿತಾ ಜೊತೆ ಮಾತನಾಡಲು 10 ನಿಮಿಷ ಕೇಳಿದೆ. ಇದಕ್ಕೆ ಕವಿತಾ ಅವರು ಒಪ್ಪಿಕೊಂಡು 2 ದಿನ ನಂತರ ಇಲ್ಲ ಎಂದು ಹೇಳುತ್ತಾರೆ. ಅದೇ ವಾರ ಸುದೀಪ್ ಅವರು ನನ್ನನ್ನು ಪ್ರೀತಿಸಿ ಎಂದು ಹೇಳಿದ್ದರು. ಆಗಿನಿಂದ ನಾನು ಅವರ ಜೊತೆ ಮಾತನಾಡಲು ಕಡಿಮೆ ಮಾಡಿದೆ. ನಾನು ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಕವಿತಾ ಅವರು ನನಗೆ ಫೋನ್ ಮಾಡುತ್ತೀನಿ ಎಂದು ಹೇಳಿದ್ದರು. ಮತ್ತೆ ಪ್ರಥಮ್ ಅವರು ಬಂದಾಗ ಕೂಡ ಅಣ್ಣ-ತಂಗಿ ಎಂದು ಹೇಳುತ್ತಿದ್ದರು. ಆಗ ನಾನು ಸರಿ ಅಣ್ಣ- ತಂಗಿ ಎಂದು ಸುಮ್ಮನೆ ಇದೆ.

ಕೆರಿಯರ್ ಹಾಳಾಗ್ತಿದೆ:
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಎಲ್ಲರು ಒಂದೊಂದು ಕೆಲಸ ಮಾಡುತ್ತಾರೆ. ನಾನು ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಪಾಠಗಳನ್ನು ಕಲಿತ್ತಿದ್ದೇನೆ. ನಾನು ಇನ್ಮುಂದೆ ಜೀವನದಲ್ಲಿ ಹೀಗೆ ಇರಲ್ಲ, ನಾನು ಬದಲಾಗಿದ್ದೇನೆ ಎಂದು ಹೇಳಿ ಬಂದೆ. ಆದರೆ ಇವರು ಬಿಡಲ್ಲ. ನನ್ನನ್ನು ಸಾಯಿಸುತ್ತಿದ್ದಾರೆ. ಮನೆಯಿಂದ ಹೊರ ಬಂದ್ಮೇಲೆ ಕವಿತಾ ಜೊತೆ ಮಾತು ಕೂಡ ಆಡಲಿಲ್ಲ. ಕಷ್ಟಪಟ್ಟು ನಾನು ಒಂದು ಕಾರ್ಯಕ್ರಮ ಮಾಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು ನನಗೆ ಕಾಲ್ ಮಾಡಿ ಈ ವಿಷಯ ತಿಳಿಸಿದ್ದರು. ನಾನು ಆ ಶೋನಲ್ಲಿ ಸರಿಯಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನನ್ನ ಕೆರಿಯರ್ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಕವಿತಾ ಅವರು ಫೋನ್ ಮಾಡುತ್ತೀನಿ ಎಂದು ಹೇಳಿದರು. ಆದರೆ ನಾನು ಅವರಿಗೆ ಕರೆ ಮಾಡುತ್ತೇನೆ ಎಂದು ಹೇಳಲಿಲ್ಲ. ಬಳಿಕ ಬಿಗ್ ಬಾಸ್ ಮನೆಯ ಪಾರ್ಟಿಯಲ್ಲಿ ನೀನು ಮಾಡಿದನ್ನು ನಾನು ಮರೆಯುವುದಿಲ್ಲ. ನಿನಗೆ ಮುಂದೆ ಇಟ್ಟಿದ್ದೀನಿ ಎಂದು ಹೇಳಿದ್ದರು. ಬಳಿಕ ಮತ್ತೊಮ್ಮೆ ನನಗೆ ಒಪನ್ ವಾರ್ನ

Share This Video


Download

  
Report form