Tamil Actor Surya Donates Rs 5000 each to 250 fan club members.
ನಟ ಸೂರ್ಯ ಸಂಕಷ್ಟದಲ್ಲಿರುವ ಅಭಿಮಾನಿಗಳ ಬೆನ್ನಿಗೆ ನಿಂತಿದ್ದಾರೆ. ತನ್ನ ಫ್ಯಾನ್ ಕ್ಲಬ್ ಗಳಿಗೆ ಸೂರ್ಯ ಹಣ ನೀಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದಿದ್ದಾರೆ. ತನ್ನನ್ನು ಬೆಂಬಲಿಸುವ, ಸಿನಿಮಾಗಳನ್ನು ಪ್ರಮೋಟ್ ಮಾಡಿ ಜನರಿಗೆ ತಲುಪಿಸುವ ಫ್ಯಾನ್ ಕ್ಲಬ್ ಗಳಿಗೆ ಸೂರ್ಯ 12.5 ಲಕ್ಷ ರೂ.ನೀಡಿದ್ದಾರೆ. ಸೂರ್ಯ ಅವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯಗೆ ಧನ್ಯವಾದ ತಿಳಿಸಿ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ