Actress Sunny Leone shares a cutout photo of her by fans in Karnataka village
ಕರ್ನಾಟಕದ ಹಳ್ಳಿಯೊಂದರಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳು ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ಹಳ್ಳಿಯಲ್ಲಿ ಸನ್ನಿ ಲಿಯೋನ್ ಕಟೌಟ್ ಹಾಕಿ ಹುಟ್ಟುಹಬ್ಬ ಆಚರಿಸಲಾಗಿದೆ. ಸೀರೆಯಲ್ಲಿ ಮಿಂಚಿರುವ ಸನ್ನಿ ಲಿಯೋನ್ ಕಟೌಟ್ ಈಗ ಎಲ್ಲರ ಆಕರ್ಷಣೆಯಾಗಿದೆ. ಹುಟ್ಟುಹಬ್ಬದ ಶುಭಾಶಯಗಳು ಸನ್ನಿ ಲಿಯೋನ್ ಎಂದು ಬರೆಯುವ ಜೊತೆಗೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಯಲಾಗಿದೆ. ಈ ಕಟೌಟ್ ಗೆ ಹೂವಿನ ಹಾರವನ್ನು ಹಾಕಲಾಗಿದೆ. ಈ ಕಟೌಟ್ ಫೋಟೋವನ್ನು ನಟಿ ಸನ್ನಿ ಲಿಯೋನ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ