ಚಿರಂಜೀವಿ ಸರ್ಜಾ ಅಗಲಿ ಇಂದಿಗೆ (ಜುಲೈ 7) ಒಂದು ತಿಂಗಳು. ಚಿರು ಅಗಲಿದ ಹನ್ನೊಂದು ದಿನಗಳ ಬಳಿಕ ಅವರ ಪತ್ನಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೃದಯ ಕಲಕುವ ಬರಹಗಳನ್ನು ಹಂಚಿಕೊಂಡಿದ್ದರು. ಅದನ್ನು ಚಿರಂಜೀವಿ ಸರ್ಜಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಹಂಚಿಕೊಂಡಿದ್ದರು. ಚಿರಂಜೀವಿ ಸರ್ಜಾ ನೆನಪಿಗಾಗಿ ಅವರ ಖಾತೆಯನ್ನು ಜೀವಂತವಾಗಿರಿಸಿದ್ದರು. ಈಗ ಇನ್‌ಸ್ಟಾಗ್ರಾಂ ಚಿರಂಜೀವಿ ಅವರ ಖಾತೆಯನ್ನು 'ಸ್ಮರಣೀಯ'ಗೊಳಿಸಿದೆ.
Demised actor Chiranjeevi Sarja's Instagram page has been memorialized as it was added by Remembering feature.