ರಾಕಿಂಗ್ ಸ್ಟಾರ್ ಯಶ್, ಸದ್ಯ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರೋ ನಟ, ಕೆಜಿಎಫ್ ಚಿತ್ರದ ಮೂಲಕ ಇಡೀ ಇಂಡಿಯನ್ ಸಿನಿಮಾ ಸ್ಯಾಂಡಲ್‍ವುಡ್ ಕಡೆ ಮುಖ ಮಾಡುವ ಹಾಗೇ ಮಾಡಿದ ನಟ, ಸದ್ಯ ಕೆಜಿಎಫ್ 2 ಚಿತ್ರದಲ್ಲಿ ಬ್ಯೂಸಿಯಾಗಿರೋ ನಟ ಯಶ್ ಅವರ ಮುಂದಿನ ಸಿನಿಮಾ ಯಾವ್ದು ಅನ್ನೋ ಪ್ರಶ್ನೆ ಈಗ ಎಲ್ಲರಲ್ಲೂ ಕಾಡ್ತಾ ಇದೆ, ಯಶ್ ಕೆಜಿಎಫ್ ನಂತರ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರ,ಯಾವ ರೀತಿ ಸಿನಿಮಾ ಮಾಡ್ತಾರೆ ಅನ್ನೋ ಮಾತುಗಳು ಅಭಿಮಾನಿ ವಲಯದಲ್ಲಿ ಕೇಳಿಬರ್ತಾ ಇದೆ, ಹೀಗಿರುವಾಗ ಸ್ಯಾಂಡಲ್‍ವುಡ್ ಅಂಗಳದಿಂದ ಹೊಸದೊಂದು ಸುದ್ದಿ ಹೊರ ಬಂದಿದೆ, ಹೌದು ನಟ ಯಶ್ ಕೆಜಿಎಫ್ ಚಿತ್ರದ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗಾಗಿ ಎಲ್ಲಾ ತಯಾರಿ ಮಾಡಿಕೊಳ್ತಾ ಇದ್ದಾರೆ ಅನ್ನೋ ಮಾಹಿತಿ ಈಗ ಹೊರಬಿದ್ದಿದೆ, ಅದು ಕನ್ನಡ ಮತ್ತೊಬ್ಬ ಪ್ರತಿಭೆಯನ್ನು ಪ್ಯಾನ್ ಇಂಡಿಯಾದಲ್ಲಿ ಪರಿಚಯ ಮಾಡುತ್ತಿದ್ದಾರೆ. ಹೌದು ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಅವರು ಯಶ್ ಅವರಿಗೆ ಮುಂದಿನ ಸಿನಿಮಾವನ್ನು ಡೈರೆಕ್ಷನ್ ಮಾಡಲಿದ್ದಾರೆ. ಲಾಕ್‍ಡೌನ್ ಟೈಂನಲ್ಲಿ ನಿರ್ದೇಶಕ ನರ್ತನ್ ಯಶ್ ಅವರಿಗೆ ಒಂದು ಲೈನ್ ಕಥೆ ಹೇಳಿದ್ದು, ಯಶ್‍ಗೆ ಕಥೆ ಇಷ್ಟವಾಗಿದಯಂತೆ, ಅದರ ಜೊತೆಯಲ್ಲಿ ಸಂಪೂರ್ಣ ಕಥೆಯನ್ನು ರೆಡಿಮಾಡಿಕೊಳ್ಳಲು ಹೇಳಿದ್ದಾರಂತೆ, ಸದ್ಯ ನರ್ತನ್ ಸ್ಕ್ರಿಪ್ಟ್ ರೆಡಿಮಾಡಿಕೊಂಡಿದ್ದು, ಕಥೆಯ ಬಗ್ಗೆ ಯಶ್ ಜೊತೆ ಚರ್ಚೆ ಮಾಡ್ತಿದ್ದಾರಂತೆ, ಆದಷ್ಟು ಬೇಗ ಸ್ಕ್ರಿಪ್ಟ್ ಓಕೆ ಮಾಡಿ, ಪ್ರಿ ಪ್ರೊಡಕ್ಷನ್‍ಗೆ ಎಲ್ಲಾ ರೆಡಿಮಾಡಿಕೊಳ್ಳಲಿದ್ದಾರಂತೆ.
ಇನ್ನು ಕೆಜಿಎಫ್ 2 ಚಿತ್ರದ ಶೂಟಿಂಗ್ 20 ರಿಂದ 25 ದಿನಗಳ ವರೆಗೆ ಬಾಕಿ ಇದ್ದು, ಚಿತ್ರದ ಶೂಟಿಂಗ್ ಮುಗಿಸಿ ಆಕ್ಟೋಬರ್ 23ಕ್ಕೆ ಚಿತ್ರವನ್ನು ತೆರೆಮೇಲೆ ತರೋದು ಪಕ್ಕಾ ಅಂತ ಹೇಳಲಾಗ್ತಿದೆ, ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ತಿಂಗಳಲ್ಲಿ ಅಥವಾ 2021ರ ಮೊದಲ ತಿಂಗಳು ಯಶ್ ಅವರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ನರ್ತನ್ ನಿರ್ದೇಶನದಲ್ಲಿ ಸೆಟ್ಟೆರಲಿದೆ.