ವೆಂಕಟ್ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎನ್ನುವುದು ತಿಳಿದೂ ಕೆಲವರು ಅವರನ್ನು ಉದ್ರೇಕಿಸುವ ಕಾರ್ಯ ಮಾಡುತ್ತಿದ್ದಾರೆ. ಕೆಲವರು ಸೆಲ್ಫಿಗಾಗಿ ಅವರೊಂದಿಗೆ ತಮಾಷೆ ಮಾಡುತ್ತಿದ್ದಾರೆ. ಈ ಚಟುವಟಿಕೆ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ. ಅವರು ಸಮಸ್ಯೆಯ ಬಗ್ಗೆ ಗೊತ್ತಿದ್ದೂ, ಮೃಗೀಯವಾಗಿ ವರ್ತಿಸಿ ಹಲ್ಲೆ ಮಾಡಿ ಅದರ ವಿಡಿಯೋ ಹಾಕಬೇಡಿ. ಇದು ಮನುಜರ ಲಕ್ಷಣವಲ್ಲ ಎಂದು ನಟ ಜಗ್ಗೇಶ್ ಹೇಳಿದ್ದರು. ಈಗ ಮತ್ತೊಬ್ಬ ನಟ ದುನಿಯಾ ವಿಜಯ್ ಈ ಘಟನೆ ಬಗ್ಗೆ ದನಿ ಎತ್ತಿದ್ದಾರೆ
Actor Duniya Vijay after seeing the videos, has requested people not to beat Huccha Venkat.