ಪ್ರತಿದಿನ ಬೆಳಿಗ್ಗೆದ್ದ ಬಳಿಕ ಕನ್ನಡ ನೋಡಿಕೊಂಡಾಗ ನಿಮ್ಮ ಮುಖ ಕಳೆಗುಂದಿದಂತೆ ಅನ್ನಿಸುತ್ತಿದೆಯೇ? ಹಾಗಾದರೆ ಕೊಂಚವೇ ಹೆಚ್ಚಿನ ಆರೈಕೆಯನ್ನು ಪ್ರತಿ ರಾತ್ರಿ ಮಲಗುವ ಮುನ್ನ ಪಡೆದಾಗ ಮರುದಿನ ಬೆಳಿಗ್ಗೆ ಮುಖದ ಕಾಂತಿ ಹೆಚ್ಚುವುದನ್ನು ಗಮನಿಸಬಹುದು. ಈ ಆರೈಕೆಯನ್ನು ನೀಡುವ ಅತ್ಯುತ್ತಮವಾದ ಮುಖಲೇಪಗಳನ್ನುಇಂದು ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ. ಈ ಮುಖಲೇಪಗಳನ್ನು ರಾತ್ರಿಯಿಡೀ ಹಚ್ಚಿಕೊಂಡಿರುವ ಮೂಲಕ ಬೆಳಿಗೆದ್ದ ಬಳಿಕ ಕಾಂತಿಯುಕ್ತ, ತಾಜಾತನದಿಂದ ಕೂಡಿದ, ಒಟ್ಟಾರೆ ನೀವೊಂದು ರಾಜಕುಮಾರಿಯಂತೆ ಅನ್ನಿಸುವಂತೆ ಆಗುತ್ತದೆ. ಇಂದಿನ ದಿನಗಳಲ್ಲಿ ಚರ್ಮಕ್ಕೆ ಅತಿ ಹೆಚ್ಚಿನ ಘಾಸಿಯಾಗಲು ಹಲವಾರು ಬಾಹ್ಯ ಕಾರಣಗಳಿವೆ. ಆದ್ದರಿಂದ ಮುಖದ ಚರ್ಮದ ಆರೈಕೆ ತುಂಬಾ ಮುಖ್ಯವಾಗಿದೆ. ತ್ವಚೆಯ ಸೌಂದರ್ಯವನ್ನು ಇಮ್ಮಡಿಸುವ ಮನೆಮದ್ದು ಆದ್ದರಿಂದ ಪ್ರತಿದಿನ ಬೆಳಿಗ್ಗೆ ಆರೋಗ್ಯಕರ ತ್ವಚೆಯನ್ನು ನಿಮ್ಮ ಕನ್ನಡಿ ಪ್ರದರ್ಶಿಸಬೇಕೆಂದರೆ ಹಿಂದಿನ ರಾತ್ರಿಯೇ ಈ ಆರೈಕೆಯನ್ನು ಪ್ರಾರಂಭಿಸಬೇಕು. ಬನ್ನಿ, ಈ ಮುಖಲೇಪಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.....