ಕೊರೊನಾವೈರಸ್‌ನಿಂದ ನಮ್ಮೆಲ್ಲರ ಜೀವನದ ಚಿತ್ರಣವೇ ಬದಲಾಗಿದೆ. ಇದುವರೆಗೆ ಕೊರೊನಾವೈರಸ್‌ಗೆ ಸೂಕ್ತ ಔಷಧಿ ಸಿಕಿಲ್ಲ. ಈಗ ಭಾರತದಲ್ಲಿ ಪ್ಲಾಸ್ಮಾ ಥೆರಪಿ ಒಮದು ಆಶಾ ಕಿರಣವಾಗಿ ಮೂಡಿ ಬಂದಿದೆ. ಕೊರೊನಾ ಬಂದಾಗಿನಿಂದ ಇತರ ಆರೋಗ್ಯ ಸಮಸ್ಯೆ ಬಂದರೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೆಲ್ಲಾ ಸಾಮಾನ್ಯ ಜ್ವರ, ಕೆಮ್ಮು ಬಂದಾಗ ಜನರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಕಷಾಯ ಮಾಡಿ ಕುಡಿಯುವುದು, ಪಕ್ಕದ ಕ್ಲಿನಿಕ್‌ಗೆ ಹೋಗಿ ಔಷಧ ತಂದರೆ ಗುಣಮುಖವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೆಮ್ಮು, ಜ್ವರ ಬಂದಿದೆ ಎಂದರೆ ಎಲ್ಲರೂ ಭಯ ಪಡುತ್ತಾರೆ. ಅದಕ್ಕೆ ಔಷಧ ಕೊಡಲು ಯಾರೂ ಸಿದ್ಧವಿರುವುದಿಲ್ಲ, ಮೊದಲಿಗೆ ಹೋಗಿ ಕೋವಿಡ್ 19 ಪರೀಕ್ಷೆ ಮಾಡಿಸುವಂತೆ ಸಲಹೆ ನೀಡುತ್ತಾರೆ. ನೀವು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು, ಮನೆಯಲ್ಲಿಯೇ ಇದ್ದಿದ್ದರೆ ನಿಮಗೆ ಸಾಮಾನ್ಯ ಜ್ವರ ಬಂದಾಗ ಇದು ಸಾಮಾನ್ಯ ಜ್ವರ ಎಂಬ ನಂಬಿಕೆ ನಿಮ್ಮಲ್ಲಿರುತ್ತದೆ. ಆದರೆ ಔಷಧಿ ತೆಗೆದುಕೊಳ್ಳಬೇಕೆಂದು ಆಸ್ಪತ್ರೆಗೆ ಹೋದರೆ ಕೋವಿಡ್ ಪರೀಕ್ಷೆ ಮಾಡಿಸಲು ಸೂಚಿಸುತ್ತಾರೆ. ಅದೇ ಪ್ರಥಮ ಚಿಕಿತ್ಸೆ ಕಿಟ್‌ಗಳು ನಿಮ್ಮಲ್ಲಿದ್ದರೆ ಸಣ್ಣ ಪುಟ್ಟ ರೋಗಗಳನ್ನೂ ಸುಲಭವಾಗಿ ಹೋಗಲಾಡಿಸಬಹುದು. ಕೋವಿಡ್ 19 ಹಾವಳಿ ಇರುವ ಈ ಸಂದರ್ಭದಲ್ಲಿ ಮನೆಯಲ್ಲಿ ಈ ಔಷಧಿ ಕಿಟ್‌ಗಳ ಸ್ಟಾಕ್ ಇರುವುದು ಒಳ್ಳೆಯದು: