ಕೊರೊನಾ ವೈರಸ್‌ನ ಭೀಕರತೆಗೆ ಚೀನಾ ತತ್ತರಿಸಿ ಹೋಗಿದೆ. ಇತರ ದೇಶಗಳಲ್ಲೂಈ ರೋಗ ಹರಡಿದ್ದು, ಪ್ರತಿಯೊಂದು ದೇಶವೂ ಈ ರೋಗ ಹರಡುವುದನ್ನು ತಡೆಯಲು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ವೈರಸ್ ಬಗ್ಗೆ ಜನ ಸಾಮಾನ್ಯರಲ್ಲಿ ಭೀತಿ ಉಂಟಾಗಿದೆ. ಇದೀಗ ಭಾರತದಲ್ಲಿಯೂ ಕೆಲವೊಂದು ಪ್ರಕರಣ ಪತ್ತೆಯಾಗಿದ್ದು, ಒಂದು ಸಾವು ಕೂಡ ಸಂಭವಿಸಿವಿರುವುದು ಕೊರೊನಾ ಭೀತಿಯನ್ನು ಹೆಚ್ಚಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ತಪ್ಪು ಮಾಹಿತಿಗಳು ಜನರ ಭೀತಿಯನ್ನು ಹೆಚ್ಚು ಮಾಡುವ ಕಾರ್ಯ ಮಾಡುತ್ತಿವೆ. ಮಾಂಸಾಹಾರ ತಿಂದರೆ ಕೊರೊನಾ ವೈರಸ್ ಹರಡುತ್ತದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದ್ದು, ಮಾಂಸ ತಿಂದರೆ ಕೊರೊನಾ ಬರಬಹುದೇ? ಎಂಬ ಭಯ ಮಾಂಸಾಹಾರ ಪ್ರಿಯರಲ್ಲಿ ಹುಟ್ಟು ಹಾಕಿದೆ. ಈ ಲೇಖನದಲ್ಲಿ ಯಾವ ಆಹಾರ ತಿಂದರೆ ತೊಂದರೆಯಿಲ್ಲ, ಆಹಾರದ ಕುರಿತು ಹರಡಿರುವ ತಪ್ಪು ಕಲ್ಪನೆಗಳೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ.