ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲಯಿದೆ. ಈ ವಿಚಾರವಾಗಿ ಧೋನಿ ಕೂಡ ಯಾವುದೇ ಸ್ಪಷ್ಟತೆಯನ್ನೂ ನೀಡಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಧೋನಿ ಜನವರಿ ತನಕ ಈ ವಿಚಾರವ ಏನನ್ನು ಕೇಳಬೇಡಿ ಎಂದಷ್ಟೇ ಹೇಳಿದ್ದರು. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ. ಎಮ್ ಎಸ್ ಧೋನಿ ಭವಿಷ್ಯಯದ ಕುರಿತಾಗಿ ಬಿಸಿಸಿಐ ಸಂಪೂರ್ಣ ಸ್ಪಷ್ಟತೆಯನ್ನು ಹೊಂದಿದೆ. ಆದರೆ ಅದನ್ನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
"Please ask Dhoni," was Sourav Ganguly's response when the BCCI president was asked if the iconic wicket-keeper batsman would be part of next year's T20 World Cup in Australia.