ಈ ಸಾಲಿನ ನವರಾತ್ರಿ ಸೆಪ್ಟೆಂಬರ್ 29 ರಿಂದ ಆರಂಭಗೊಂಡು ಅಕ್ಟೋಬರ್ 7ರವರೆಗೆ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಮಾತೆ ಪಾವರ್ತಿಯೇ ಒಂಭತ್ತು ಅವತಾರಗಳನ್ನು ತಾಳಿ ನವರಾತ್ರಿಯ ಸಮಯದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾರೆ. ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ದಮನ ಮಾಡುವ ಈ ದಿನವೇ ನವರಾತ್ರಿಯಾಗಿದೆ. ಭಾರತದ ಕೆಲವು ಕಡೆ ರಾಮನು ರಾಣವನ ಮೇಲೆ ಗೆಲುವನ್ನು ಸಾಧಿಸಿದ ದಿನವಾಗಿ ಕೂಡ ನವರಾತ್ರಿಯನ್ನು ಆಚರಿಸಲಾಗುತ್ತದೆ. ಹೀಗೆ ದೇಶಾದ್ಯಂತ ನವರಾತ್ರಿಯನ್ನು ಯಾವುದೇ ಜಾತಿ ಮಥ, ಬಡವ, ಶ್ರೀಮಂತನೆಂಬ ಬೇಧವಿಲ್ಲದೆ ಆಚರಿಸಲಾಗುತ್ತದೆ.