"ಯಡಿಯೂರಪ್ಪ ಅವರೇ ಐಟಿಗೆ ದೂರು ನೀಡಿ ಡಿಕೆಶಿ ಮೇಲೆ ಕ್ರಮ ಕೈಗೊಳ್ಳಿ ಅಂತ ಪತ್ರ ಬರೆದಿದ್ದಾರೆ. ಆದರೆ ಈಗ ದ್ವೇಷದ ರಾಜಕಾರಣ ಇಲ್ಲ ಎಂದು ಸುಮ್ಮನೆ ಹೇಳುತ್ತಾರೆ. ಅಂದಿನ ಬಿಜೆಪಿ ಸರ್ಕಾರದಲ್ಲಿ ವಿದ್ಯುತ್ ಛಕ್ತಿ ಹಗರಣ ನಡೆದಿತ್ತು. ಆಗ ಡಿ.ಕೆ.ಶಿವಕುಮಾರ್ ವಿದ್ಯುತ್ ಮಂತ್ರಿಯಾಗಿದ್ದರು. ನಾನು ಡಿಕೆಶಿಗೆ ಹೇಳಿದ್ದೆ, ಕಳೆದ ಸರಕಾರದ ವಿದ್ಯುತ್ ಹಗರಣವನ್ನು ತನಿಖೆ ಮಾಡಿ ಅಂತ. ಅಂದು ಡಿಕೆಶಿ ತನಿಖೆ ಮಾಡಿಸಿದ್ದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ಯಡಿಯೂರಪ್ಪ ಕುರಿತು ಮತ್ತೆ ಗುಡುಗಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
"Yeddyurappa himself complained to IT and took action against Dk shivakumar. There was a power scam in the BJP government at that time. DK Shivakumar was the power minister in congress government. If Dk shivakumar investigated then, would this be the case today? said former Chief Minister HD Kumaraswamy in ramanagar.