Darshan wife Vijayalakshmi changed her name in twitter. Vijayalakshmi Darshan is now Vijayalakshmi on twitter. But what could be the reason?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸಾರದ ಗಲಾಟೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ(ಆಗಸ್ಟ್ 10) ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿದೆ. ಸಂಸಾರದ ವಿಚಾರ ಮತ್ತೆ ಬೀದಿಗೆ ಬಂದಿದೆ ಎನ್ನುವ ಮಾತುಗಳು ಜೋರಾಗಿ ಹರಿದಾಡುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ದಿಢಾರ್ ನೆ ಟ್ವೀಟ್ ಮಾಡಿದ್ದಾರೆ. "ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು" ಎಂದು ಹೇಳಿದ್ದಾರೆ. ವಿಜಯಲಕ್ಷ್ಮಿ ಯಾಕೆ ಹೀಗೆ ಟ್ವೀಟ್ ಮಾಡಿದ್ರು ಎನ್ನುವಷ್ಟೊತ್ತಿಗೆ ವಿಜಯಲಕ್ಷ್ಮಿ ಅವರ ಹೆಸರಿನ ಪಕ್ಕದಲ್ಲೆ ಇದ್ದ ದರ್ಶನ್ ಹೆಸರನ್ನು ತೆಗೆದುಹೊಕಿದ್ದಾರೆ.