ಸ್ಯಾಂಡಲ್ ವುಡ್ ನ ಹಿರಿಯ ನಟ ದತ್ತಾತ್ರೇಯಾ, ಹೀಗೆನ್ನುವುದಕ್ಕಿಂತ ದತ್ತಣ್ಣ ಅಂದ್ರೇನೆ ಚಿತ್ರಾಭಿಮಾನಿಗಳಿಗೆ ತಟ್ ಅಂತ ಗೊತ್ತಾಗುತ್ತೆ. ಕನ್ನಡ ಚಿತ್ರಪ್ರೀಯರ ಪ್ರೀತಿಯ ದತ್ತಣ್ಣ ಇಂದು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಹೌದು, ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ 'ಮಿಷನ್ ಮಂಗಲ್' ಚಿತ್ರದಲ್ಲಿ ದತ್ತಣ್ಣ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.