ಯಶ್, ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿದ್ದಾರೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಯಶ್ ಪ್ರತಿಕ್ರಿಯಿಸಿದ್ದು, ನಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದಾರೆ. ಜೆಡಿಎಸ್ ಕಳ್ಳರ ಪಕ್ಷ ಎಂದು ನಾನು ಎಲ್ಲಿಯೂ ಹೇಳಿಲ್ಲ, ನನಗೆ ಜೆಡಿಎಸ್‌ನಲ್ಲೂ ಸ್ನೇಹಿತರಿದ್ದಾರೆ, ನಾನು ಜೆಡಿಎಸ್ ಬಗ್ಗೆ ಹಾಗೆ ಹೇಳಿದ್ದೇ ಆದಲ್ಲಿ ಸಾಕ್ಷ್ಯ ನೀಡಲಿ, ಅವರು ಹೇಳಿದಂತೆ ಕೇಳುತ್ತೇನೆ ಎಂದು ನಟ ಯಶ್ ಹೇಳಿದ್ದಾರೆ.