ಕರ್ನಾಟಕದಲ್ಲಿ ಚುನಾವಣೆ ಗೆಲ್ಲೋಕೆ ಬೇಕಾಗಿರೋದು ಮೂರೇ ಮುಖ್ಯವಾದ ಅಂಶ. ಒಂದು ಜಾತಿ, ಎರಡು ಜಾತಿ ಮತ್ತು ಮೂರು ಜಾತಿ! ಹೌದು, ಕರ್ನಾಟಕದ ರಾಜಕೀಯ ನಿಂತಿರುವುದೇ ಜಾತಿಯ ಮೇಲೆ ಎಂದು ರಾಷ್ಟ್ರ ಮಟ್ಟದಲ್ಲೂ ಮಾತಿದೆ. ರಾಜ್ಯದಲ್ಲಿ ನಡೆದ ಚುನಾವಣೆಗಳು, ಸೋಲು-ಗೆಲುವುಗಳ ಲೆಕ್ಕಾಚಾರಕ್ಕೆ ನಿಂತರೆ ಆ ಮಾತು ಸತ್ಯ ಎಂಬುದಕ್ಕೆ ಬೇಕಷ್ಟು ಪುರಾವೆ ಸಿಗುತ್ತವೆ.