ನನ್ನ ಆರೋಗ್ಯ ಏರುಪೇರಾದ ಸಮಯದಲ್ಲಿ ಅಣ್ಣ ಶಿವರಾಜ್ ಕುಮಾರ್, ಅತ್ತಿಗೆ ಗೀತಾ, ತಮ್ಮ ಪುನೀತ್, ಅಶ್ವಿನಿ ಎಲ್ಲರೂ ನನ್ನನ್ನು ಮಗುವಿನ ಹಾಗೆ ನೋಡಿಕೊಂಡಿದ್ದಾರೆ, ಜೀವನ ಮುಗೀತು ಅನ್ಕೊಂಡಿದ್ದೆ ಆದ್ರೆ ಅಪ್ಪ, ಅಮ್ಮ ಹಾಗೂ ದೇವರ ಆಶೀರ್ವಾದದಿಂದ ನನ್ನ ಸಿನಿ ಜರ್ನಿ ಮತ್ತೆ ಆರಂಭವಾಗಿದೆ, 'ಅಮ್ಮನ ಮನೆ' ಸಿನಿಮಾ ನನ್ನ ಜೀವನದಲ್ಲಿ ಎಂದು ಮರೆಯಲಾಗದ ಒಂದು ಸಿನಿಮಾ ಹಾಗೂ ಪಾತ್ರ ಹಾಗಾಗಿ ತುಂಬಾ ಇಷ್ಟ ಪಟ್ಟು ಈ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
Raghavendra Rajkumar said that.. My cini journey re-started with my father and mother and God's blessings, 'Ammana Mane' was a movie that I did, I never forget in my life this movie is memorable for me, i like the story very much that's why i play a role in this movie.