ನಟಿ ಜಯಶ್ರೀ ಭೇದಭಾವ ಮಾಡುತ್ತಾರೆ.. ಕವಿತಾ ಮತ್ತು ಶಶಿಗೆ ಮಾತ್ರ ಜಯಶ್ರೀ ಚೆನ್ನಾಗಿ ಊಟ ಕೊಡುತ್ತಾರೆ.. ಬೇರೆಯವರ ಬಗ್ಗೆ ಆಕೆ ಕ್ಯಾರೆ ಕೂಡ ಅನ್ನಲ್ಲ'' ಎಂಬ ಗುಸುಗುಸು 'ಬಿಗ್ ಬಾಸ್' ಮನೆಯಲ್ಲಿ ಮೊದಲ ವಾರದಿಂದಲೂ ಕೇಳಿಬರುತ್ತಿತ್ತು. ಜಯಶ್ರೀ ಅವರ ಈ ವರ್ತನೆ ಬಗ್ಗೆ ರಶ್ಮಿ, ಆಂಡ್ರ್ಯೂ, ಅಕ್ಷತಾ, ರಾಕೇಶ್ ಗೆ ಬೇಸರ ಇದೆ. ಹೀಗಾಗಿ, 'ನ್ಯಾಯ ಇಲ್ಲಿದೆ' ಚಟುವಟಿಕೆ ವೇಳೆ ಜಯಶ್ರೀ ವಿರುದ್ಧ ಅಕ್ಷತಾ ಆರೋಪ ಮಾಡಿದರು.