ಮಂಡ್ಯದ ರೈತನೊಬ್ಬ ಮುಖ್ಯಮಂತ್ರಿ ಹೆಸರಲ್ಲಿ ಹೃದಯ ಹಿಂಡುವ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟಿದ್ದಾನೆ. ಮಂಡ್ಯ ತಾಲ್ಲೂಕಿನ, ದುದ್ದ ಹೋಬಳಿಯ ಕನ್ನಹಟ್ಟಿ ಗ್ರಾಮದ ಜಯಕುಮಾರ್ (43) ಆತ್ಮಹತ್ಯೆಗೆ ಶರಣಾಗಿರುವ ರೈತ. ಆತನ, ಆತನ ಕುಟುಂಬದ ಸ್ಥಿತಿಯನ್ನು ಸವಿವರವಾಗಿ ಪತ್ರದಲ್ಲಿ ಬರೆದು ಆತ ನೇಣುಬಿಗಿದುಕೊಂಡಿದ್ದಾನೆ.