ನೂತನ ಶಾಸಕಿಯಾಗಿ ಗುರುವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ ಅನಿತಾ ಕುಮಾರಸ್ವಾಮಿ ಅವರ ಮೇಲೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಪ್ರಮಾಣವಚನ, ಪತಿ-ಪತ್ನಿ ಬರೆಯಲಿದ್ದಾರೆ ಇತಿಹಾಸ "ಭಲೇ, " ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವುದಿಲ್ಲ. ಆದರೆ ಸಚಿವ ಸ್ಥಾನ ನೀಡಿದರೆ ಉತ್ತಮ ಕೆಲಸ ಮಾಡುತ್ತೇನೆ" ಎಂಬ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ, ಈಗಾಗಲೇ ಮುಖ್ಯಮಂತ್ರಿ, ಲೋಕೋಪಯೋಗಿ, ಸಾರಿಗೆ ಸಚಿವರನ್ನು ಒಳಗೊಂಡ ಪರಿವಾರದ ಸದಸ್ಯೆ ಹಾಗೂ ನೂತನ ಶಾಸಕಿ. ಯಾವುದೇ ಮುಜುಗರವಿಲ್ಲದೆ!" ಎಂದು ಟ್ವೀಟ್ ಮಾಡುವ ಮೂಲಕ ರಾಜಾಜೀನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಮಾತಿನ ಛಾಟಿಯೇಟು ನೀಡಿದ್ದಾರೆ.
Rajajinagar BJP MLA Suresh Kumar mocks CM HD Kumarawamy's wfe and newly appointed JDS MLA from Ramanagara constituency Anitha Kumaraswamy.