JDS supremo HD Devegowda and former CM Siddaramaiah joint press conference. This press conference shows, how the political situation will change in just couple of months.
'ಮಾತು ಮನೆ ಕೆಡಿಸ್ತು' ಅನ್ನೋ ಗಾದೆಮಾತು ರಾಜಕೀಯಕ್ಕೆ ಅನ್ವಯಿಸುವುದಿಲ್ಲವೋ ಏನೋ? ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ, ಕೋಮುವಾದಿ ಬಿಜೆಪಿಯಿಂದ ದೇಶವನ್ನು ರಕ್ಷಿಸುವ ಏಕೈಕ ಉದ್ದೇಶದಿಂದ (ಅವರೇ ಹೇಳಿದಂತೆ) ಜಂಟಿ ಪತ್ರಿಕಾಗೋಷ್ಠಿಯನ್ನು ಶನಿವಾರ (ಅ 20) ನಡೆಸಿದ್ದರು. ದಶಕಗಳ ನಂತರ ಗುರುಶಿಷ್ಯರ ಸಮಾಗಮದಂತೆ ಇದ್ದ ಗೋಷ್ಠಿ, ಇಷ್ಟುದಿನ ಹಾವು-ಮುಂಗುಸಿಯಂತಿದ್ದ ನೀವು, ಈಗ ಒಂದಾಗಿದ್ದೇವೆ ಎಂದರೆ ಜನ ನಂಬುತ್ತಾರಾ ಎನ್ನುವ ಮಾಧ್ಯಮದ ಕಡೆಯಿಂದ ಬಂದ ಪ್ರಶ್ನೆಗೆ, ದೇವೇಗೌಡ್ರು ಗರಂ ಆದರು.