ಈ ಬಾರಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆ.4ರಿಂದ ಆರಂಭವಾಗಲಿದೆ. ಪ್ರವೇಶ ಶುಲ್ಕವನ್ನು 70 ರೂ.ಗೆ ಏರಿಸಲಾಗಿದೆ. ದರ ಏರಿಕೆಯು ರಜೆ ಮತ್ತು ವಾರದ ಎಲ್ಲಾ ದಿನಗಳಿಗೆ ಅನ್ವಯವಾಗಲಿದೆ. ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 20 ರೂ. ನಿಗದಿಯಾಗಿದೆ. ಮನರಂಜೆನಗೂ ತೆರಿಗೆ ಅನ್ವಯವಾಗುವುದರಿಂದ ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಫಲಪುಷ್ಪ ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ಶುಲ್ಕ ಹೆಚ್ಚಳದ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.