ಲಾಹೋರ್ (ಪಾಕಿಸ್ತಾನ), ಜುಲೈ 13: ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಮಗಳು ಮರ್ಯಾಮ್ ನವಾಜ್ ರನ್ನು ನ್ಯಾಷನಲ್ ಅಕೌಂಟಬಿಲಿಟಿ ಬ್ಯುರೋ (ಎನ್ ಎಬಿ) ಅಧಿಕಾರಿಗಳು ಶುಕ್ರವಾರ ರಾತ್ರಿ ಇಲ್ಲಿನ ಅಲ್ಮಾ ಇಕ್ಬಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದರು. ಆ ನಂತರ ಇಸ್ಲಾಮ್ ಬಾದ್ ಗೆ ಸಣ್ಣ ಚಾರ್ಟರ್ಡ್ ವಿಮಾನದಲ್ಲಿ ಇಬ್ಬರನ್ನೂ ಕರೆದೊಯ್ಯಲಾಯಿತು. ಇಸ್ಲಾಮ್ ಬಾದ್ ನಲ್ಲಿ ನವಾಜ್ ಹಾಗೂ ಮರ್ಯಮ್ ರನ್ನು ಅದಿಯಾಲಾ ಅಥವಾ ಅಟೋಕ್ ಜೈಲಿಗೆ ಕರೆದೊಯ್ಯಲಾಗುತ್ತದೆ. ಲಂಡನ್ ನಿಂದ ತೆರಳಿದ್ದ ಅವರಿಬ್ಬರು ಅಬುಧಾಬಿಯಿಂದ ಲಾಹೋರ್ ಗೆ ಹೊರಡುವ ಹೊತ್ತಿಗೆ ಪಾಕಿಸ್ತಾನದ ಸಮಯ ಸಂಜೆ ಆರು ಗಂಟೆ ಆಗಿತ್ತು.