Karnataka election results 2018: Is Congress high command thinking to give KPCC chairman post and a cabinet minister post to D K Shivakumar? Some sources said, Congress high command is very much happy about his performance in managing situations during Karnataka election results 2018
ಕಾಂಗ್ರೆಸ್ ಪಾಲಿಗೆ ಡಿಕೆ ಶಿವಕುಮಾರ್ ಅಂದ್ರೆ ಆಪದ್ಬಾಂಧವ. ಅಷ್ಟೇ ಅಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಡಿಕೆಶಿ ಇಲ್ಲದ ಕರ್ನಾಟಕ ಕಾಂಗ್ರೆಸ್ ಅನ್ನು ಊಹಿಸುವುದಕ್ಕೂ ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಿಪ್ಪ ಡಿಕೆಶಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಲು ಸಕಲ ಸಿದ್ಧತೆ ನಡೆಸಿದೆಯಾ? ಗುಜರಾತ್ ರಾಜ್ಯ ಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದು ನಿಂತ ಗಟ್ಟಿಗ ಡಿಕೆಶಿ, ಇದೀಗ ಕರ್ನಾಟಕ ಚುನಾವಣೆಯ ನಂತರವೂ ಕಾಂಗ್ರೆಸ್, ಜೆಡಿಎಸ್ ಶಾಸಕರ್ಯಾರೂ ಕದಲದಂತೆ ರೆಸಾರ್ಟ್ ನಲ್ಲೇ ದಿಗ್ಬಂಧನ ಹಾಕಿದ್ದು ಇದೇ ಡಿಕೆಶಿ.