ಭಾರತದಲ್ಲಿ ಇದೆ ಗುರುವಾರ ಭರ್ಜರಿ ಬಿಡುಗಡೆ ಕಂಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಗೆ ಒನ್‌ಪ್ಲಸ್ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೇ ವೇಳೆಗೆ ಒನ್‌ಪ್ಲಸ್ ಕಂಪೆನಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಮೇ 21 ರಂದು ಒನ್‌ಪ್ಲಸ್ 6 ಫ್ಲಾಶ್‌ಸೇಲ್ ಆಯೋಜನೆ ಮಾಡಿರುವ ಮೇ 22ರಿಂದಲೇ ಎಲ್ಲೆಡೆ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ತಿಳಿಸಿದೆ. ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಬಿಡುಗಡೆಯಾದ ಮೊದಲ ವಾರದಲ್ಲಿ ಗ್ರಾಹಕರು ಎಸ್‌ಐ ಡೆಬಿಟ್ ಮತ್ತು ಕ್ರೆಡಿಟ್‌ಕಾರ್ಡ್ ಮೂಲಕ ಖರೀದಿಸಿದರೆ, ₹2,000 ಕ್ಯಾಷ್‍ಬ್ಯಾಕ್ ಸೌಲಭ್ಯವಿರಲಿದೆ. ಅಷ್ಟೇ ಅಲ್ಲದೇ, ಗ್ರಾಹಕರು ಎಲ್ಲ ಪ್ರಮುಖ ಬ್ಯಾಂಕುಗಳಿಂದ 3 ತಿಂಗಳವರೆಗಿನ ವೆಚ್ಚರಹಿತ ಇಎಂಐ ಸೌಲಭ್ಯವನ್ನು ಪಡೆಯಲೂ ಅರ್ಹರಾಗಿರುತ್ತಾರೆ ಎಂದು ಒನ್‌ಪ್ಲಸ್ ಕಂಪೆನಿ ತಿಳಿಸಿದೆ.ಅಮೆಜಾನ್ ಡಾಟ್ ಇನ್, ಒನ್‌ಪ್ಲಸ್ ಡಾಟ್ ಇನ್ ಮತ್ತು ಒನ್‍ಪ್ಲಸ್ ಎಕ್ಸ್‌ಪೀರಿಯನ್ಸ್ ಮಳಿಗೆಗಳಲ್ಲಿ ಮೇ 21ರಂದು ಮಧ್ಯಾಹ್ನ 12 ಗಂಟೆಗೆ ಫ್ಲಾಶ್‌ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿರಲಿದೆ. ಹಾಗಾದರೆ, ಪ್ರೀಮಿಯಂ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು?
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot