ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ರಸ್ತೆಗಳು ಮಾಡಿದ್ದಾರೆ. ಆದರೇ ನೀರು ಹೋಗಲ್ಲ. ಮಳೆ ಬಂದರೆ ತುಂಬಾ ಸಮಸ್ಯೆ ಆಗುತ್ತೆ. ನಾವು ಕಟ್ಟುವ ತೆರಿಗೆ ಹಣ ಪೋಲಾಗುತ್ತಿದೆ. ಜೊತೆಗೆ ನೀರಿನ ಸಮಸ್ಯೆ ಇದೆ. ಕಾವೇರಿನ ನೀರು ಸರಿಯಾಗಿ ಬರಲ್ಲ. ರಾತ್ರಿ ೧೨ಗಂಟೆಗೆ ನೀರು ಬರುತ್ತೆ. ಅಷ್ಟೊತ್ತಿಗೆ ಹೋಗಿ ಎಲ್ಲಿ ಹಿಡಿಯೋದು? ಕಾವೇರಿ ಪೈಪಿನಲ್ಲಿ ಬರೋ ನೀರು ಚೆನ್ನಾಗಿರೊಲ್ಲ. ವಾಸನೆ ಬರುತ್ತೆ ಎಂದು ಹೇಳಿದರು.