ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಸಿಕ್ಕ ವಿಜಯನಗರದ ನಿವಾಸಿಯೊಬ್ಬರು, ನಾನು ವಿಜಯನಗರದಲ್ಲಿ ೩೫ ವರ್ಷದಿಂದ ಇದ್ದೀನಿ. ಈಗ ತುಂಬ ಬದಲಾವಣೆಯಾಗಿದೆ. ಈ ಬಾರಿಯೂ ಇಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ಅಭಿಪ್ರಾಯದಲ್ಲಿ ಇದ್ದೀನಿ. ಬಿಜೆಪಿ ಯವರು ಅಧಿಕಾರಕ್ಕೆ ಬಂದರೂ ಕೂಡ ಅವರು ಸರಿಯಾಗಿ ನಡೆಸಿಕೊಂಡು ಹೋಗೋಲ್ಲ. ಅವರದ್ದು ಬರಿ ನಾಟಕ. ಜನರ ನಂಬಿಕೆ ಕಳ್ಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.