Public Opinion On Karnataka Election : ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬೆಂಬಲವಿಲ್ಲ| Oneindia Kannada

Oneindia Kannada 2018-05-08

Views 14

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಚಿಕ್ಕಪೇಟೆಯ ನಿವಾಸಿಯೊಬ್ಬರು, 'ನಮ್ಮ ಕ್ಷೇತ್ರದಲ್ಲಿ ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಬೆಂಬಲವಿಲ್ಲ. ನಮ್ಮ ಬಗ್ಗೆ ಯಾರು ಗಮನ ಕೊಡಲ್ಲ. ಸರ್ಕಾರದಿಂದ ನಮಗೆ ಏನು ತಲುಪುತ್ತಿಲ್ಲ. ಅವರಿಗೆ (ರಾಜಕಾರಣಿಗಳಿಗೆ) ಬೇಕಾದವರಿಗೆ ಮಾತ್ರ ಅದು ತಲುಪುತ್ತೆ. ಅದಕ್ಕೆ ಬೇರೆಯದೇ ಕಾರಣಗಳಿವೆ. ಅದನ್ನು ಹೇಳಿಕೊಳ್ಳಲು ಆಗಲ್ಲ' ಎಂದರು. ಯಾವ ರೀತಿ ಬೆಂಬಲ ಬೇಕು ಎನ್ನುವ ನಮ್ಮ ಪ್ರಶ್ನೆಗೆ ಉತ್ತರಿದ ಅವರು, 'ನಮ್ಮ ಸಮಸ್ಯೆ ಏನು ಎಂದು ಬಂದು ಕೇಳಬೇಕು. ಎಲ್ಲ ಸರಿ ಪಡಿಸಲು ಸಾಧ್ಯವಾಗದಿದ್ದರು. ಕೈಲಾದಷ್ಟು ಸಹಾಯವಾದ್ರು ಮಾಡ್ಬೇಕು. ಸರ್ಕಾರದಿಂದ ನಮಗೆ ಏನು ಬರಬೇಕೋ ಅದನ್ನು ತಲುಪಿಸಬೇಕು' ಎಂದು ಹೇಳಿದರು.

Share This Video


Download

  
Report form
RELATED VIDEOS