Shivaraj K R Pete, Winner of Zee Kannada Channel's popular show 'Comedy Khiladigalu' is in demand in Sandalwood. Shivaraj K R Pete has now completed one year of his cinema life journey.
ಜೀ ಕನ್ನಡ ವಾಹಿನಿ.. ಅದರಲ್ಲೂ 'ಕಾಮಿಡಿ ಕಿಲಾಡಿಗಳು' ಶೋ ನೋಡುವವರಿಗೆ ಕೆ.ಆರ್.ಪೇಟೆಯ ಪ್ರತಿಭೆ ಶಿವರಾಜ್ ಪರಿಚಯ ಇರಲೇಬೇಕು. ಅದ್ಯಾವ ಘಳಿಗೆಯಲ್ಲಿ 'ಕಾಮಿಡಿ ಕಿಲಾಡಿಗಳು' ವೇದಿಕೆ ಮೇಲೆ ಕಾಲಿಟ್ರೋ... ಅಂದಿನಿಂದ ಶಿವರಾಜ್ ಕೆ.ಆರ್.ಪೇಟೆ ಅದೃಷ್ಟ ಖುಲಾಯಿಸಿಬಿಟ್ಟಿದೆ. ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಎಲ್ಲರ ಫೇವರಿಟ್ ಆಗಿದ್ದ ಶಿವರಾಜ್.ಕೆ.ಆರ್.ಪೇಟೆ ಇಂದು ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ ಅಂದ್ರೆ ಖಂಡಿತ ಸುಳ್ಳಲ್ಲ.ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುವ ಜೊತೆಗೆ ಕಚಗುಳಿ ಇಡುವ ತಾಕತ್ತು ಇರುವ ಶಿವರಾಜ್.ಕೆ.ಆರ್.ಪೇಟೆಗೆ ಗಾಂಧಿನಗರದ ಭಾಗ್ಯದ ಬಾಗಿಲು ತೆರೆದಿದೆ.