Manvitha Harish spoke about Ashika Ranganath in Star Suvarna's new show 'No1 yari with Shivanna' program. Manvitha Harish reveals an interesting fact as well, where she does one thing before she goes to sleep.
ಸಾಮಾನ್ಯವಾಗಿ ನಾವು, ನೀವು ಎಲ್ಲರೂ ರಾತ್ರಿ ಮಲಗುವ ಮುನ್ನ ಒಮ್ಮೆ ಮೊಬೈಲ್ ನೋಡುತ್ತೇವೆ. ನಮ್ಮ ಸ್ನೇಹಿತರಿಗೋ, ಪ್ರೀತಿ ಪಾತ್ರರಿಗೋ ಒಂದು ಗುಡ್ ನೈಟ್ ಸಂದೇಶ ಕಳುಹಿಸುತ್ತೇವೆ. ಅದೇ ರೀತಿ ನಟಿ ಮಾನ್ವಿತಾ ಹರೀಶ್ ದಿನ ರಾತ್ರಿ ಮಲಗುವ ಮುನ್ನ ಒಬ್ಬರಿಗೆ ಮೆಸೇಜ್ ಮಾಡುತ್ತಾರಂತೆ. ಮಾನ್ವಿತಾ ಯಾವ ಹುಡುಗನಿಗೆ ಅಥವಾ ಯಾವ ನಟನಿಗೆ ಮೆಸೇಜ್ ಮಾಡುತ್ತಾರೆ ಎನ್ನುವ ದೊಡ್ಡ ಕುತೂಹಲ ಇಟ್ಟುಕೊಳ್ಳಬೇಡಿ. ಯಾಕಂದ್ರೆ ಮಾನ್ವಿತಾ ದಿನ ರಾತ್ರಿ ಕನ್ನಡದ ನಟಿ ಒಬ್ಬರಿಗೆ ಲಾಸ್ಟ್ ಮೆಸೇಜ್ ಮಾಡುತ್ತಾರೆ.