ಭಾನುವಾರವಷ್ಟೇ ( ಜ 11) ರಾಜ್ಯದ ಪ್ರಥಮ ಸ್ವಾತಂತ್ರ್ಯೋತ್ತರ ಮುಖ್ಯಮಂತ್ರಿ ದಿ. ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ (ಕೆ ಸಿ ರೆಡ್ಡಿಯವರ) ಪ್ರತಿಮೆಯನ್ನು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಅನಾವರಣ ಮಾಡಿದ್ದರು. ಈ ಪ್ರತಿಮೆ ಸ್ಥಾಪನೆಯ ಹಿಂದೆ, ಬಹಳಷ್ಟು ಶ್ರಮವಹಿಸಿದ್ದು ಕೆ ಸಿ ರೆಡ್ಡಿಯವರ ಹಿರಿಯ ಮೊಮ್ಮಗಳು ಕವಿತಾ ರೆಡ್ಡಿ (ವಸಂತ ಕವಿತ ಕೆ ಸಿ ಶ್ರೀಕರ್) ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಕವಿತಾ ರೆಡ್ಡಿ, ಕೆ ಸಿ ರೆಡ್ಡಿಯವರ ಪ್ರತಿಮೆ ಅನಾವರಣದ ಹಿಂದಿನ ಪರಿಶ್ರಮ, ಪ್ರಸಕ್ತ ಚುನಾವಣೆಯ ಬಗ್ಗೆ 'ಒನ್ ಇಂಡಿಯಾ' ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದಭಾಗ