Series of tweets against BJP from Priyanka Gandhi Vadra from @WithPGV account. Is it shows her entry into politics? In her tweets, Priyanka criticized BJP in various issues like Karnataka election campaign war of words, Aadhaar, Nehru.
ಮೊನ್ನೆ ಮೊನ್ನೆ ಈಶಾನ್ಯ ರಾಜ್ಯದಲ್ಲೂ ಕಾಂಗ್ರೆಸ್ ಸೋಲು ಅನುಭವಿಸಿದಾಗ, ಪ್ರಿಯಾಂಕ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಇಳಿದರೆನೇ, ಕಾಂಗ್ರೆಸ್ಸಿಗೆ ಒಂದು ದಾರಿಗೆ ಬರಲು ಸಾಧ್ಯ ಎನ್ನುವ ಹಿಂದಿನ ಮಾತು ಏನಿತ್ತೋ ಅದು ಮತ್ತೆ ಚಾಲನೆಗೆ ಬಂದಿತ್ತು. ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗುತ್ತಾರೋ, ಅಲ್ಲೆಲ್ಲಾ ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟಬುತ್ತಿ ಎಂದು ಬಿಜೆಪಿಯವರು ಅಣಕವಾಡುತ್ತಿರುವುದು ಹೊಸದೇನಲ್ಲ. ಗುಜರಾತ್ ನಲ್ಲಿ ರಾಹುಲ್ ರಾಜಕೀಯ ಪ್ರಚಾರ ಮಾಡಿದಂತೆ, ಕರ್ನಾಟಕದಲ್ಲಿ ಹೆಚ್ಚುಹೆಚ್ಚು ಅವರು ಪ್ರಚಾರಕ್ಕೆ ಬರದಿದ್ದರೆ ಸಾಕು ಎನ್ನುವ ನಿಲುವನ್ನು ಒಳಗೊಳಗೆ ರಾಜ್ಯ ಕಾಂಗ್ರೆಸ್ಸಿಗರು ಹೊಂದಿದ್ದಾರೋ, ಗೊತ್ತಿಲ್ಲಾ..