Actor Duniya Vijay supports MLA's daughter Lakshmi Nayak and Film producer Sundar Gowda marriage. He gave shelter to the newly married couple in his House. and today he bring them to Yelhanka police station to record their statements.
ಪೋಷಕರ ವಿರೋಧದ ನಡುವೆ ನಿನ್ನೆ ಮೈಸೂರಿನಲ್ಲಿ ವಿವಾಹವಾದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ಮಗಳು ಲಕ್ಷ್ಮಿ ನಾಯಕ್ ಅವರಿಗೆ ದುನಿಯಾ ವಿಜಿ ಸಾಥ್ ನಿಡಿದ್ದಾರೆ. ನವ ವಿವಾಹಿತ ಜೋಡಿಗೆ ತಮ್ಮದೆ ಮನೆಯಲ್ಲಿ ನಿನ್ನೆ ಆಶ್ರಯ ನೀಡಿದ್ದ ದುನಿಯಾ ವಿಜಿ ಅವರು ಇಂದು ಅವರನ್ನು ತಮ್ಮ ನೇತೃತ್ವದಲ್ಲೇ ಯಲಹಂಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹೇಳಿಕೆ ದಾಖಲು ಮಾಡಿಸಿದ್ದಾರೆ. ಇಂದೇ ಅಧಿಕೃತವಾಗಿ ಅವರಿಬ್ಬರ ಮದುವೆಯನ್ನು ಅಧಿಕೃತವಾಗಿ ನೊಂದಾವಣಿ ಮಾಡಿಸುವ ಸಾಧ್ಯತೆಯೂ ಇದೆ.