ವಿವಿಧ ಕ್ಷೇತ್ರಗಳ ಸ್ವಯಂ ಸೇವಕರನ್ನು ಒಳಗೊಂಡ 'ಅಗ್ಲಿ ಇಂಡಿಯನ್ ' ತಂಡ ನಮ್ಮ ಬನಶಂಕರಿಯ ನಮ್ಮ ಮೆಟ್ರೋ ನಿಲ್ದಾಣವನ್ನು ಸ್ವಚ್ಛಗೊಳಿಸಿ ಮೆಟ್ರೋ ಪಿಲ್ಲರ್ ಗಳ ಮೇಲೆ ಬಣ್ಣ ಬಳಿದು ಕಂಗೊಳಿಸುವಂತೆ ಮಾಡುತ್ತಿದೆ. ಅಗ್ಲಿ ಇಂಡಿಯನ್ ತಂಡವು ಕ್ಲೀನ್ ಬೆಂಗಳೂರು ಅಭಿಯಾನದಡಿಯಲ್ಲಿ ಮೆಟ್ರೋ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿದ್ದು, ಈಗಾಗಲೇ ಜೆಪಿನಗ ಮೆಟ್ರೋ ನಿಲ್ದಾಣದಲ್ಲಿ ತಮ್ಮ ಕಾರ್ಯ ಮುಂದುವರೆಸಿದ್ದು ಸೋಮವಾರ ಬನಶಂಕರಿ ಮೆಟ್ರೋ ನಿಲ್ದಾಣವನ್ನು ಶುಚಿಗೊಳಿಸಿ ಪಿಲ್ಲರ್ ಗಳ ಮೇಲೆ ಬಣ್ಣ ಬಳಿಯಲಾಗುತ್ತಿದೆ.