BJP supremo Amit Shah has come out with Plan A and Plan B. He is aiming to win more than 160 seats in the upcoming Karnataka Assembly Election 2018. If BJP fails to get majority, then will have to be ready for Plan B and align with JDS. What's going to happen?
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕರ್ನಾಟಕದ ಬಿಜೆಪಿ ನಾಯಕರಿಗೆ ಹೊಸತಾಗಿ ಎ ಮತ್ತು ಬಿ ಪ್ಲಾನ್ ಕುರಿತು ಸಂದೇಶ ರವಾನಿಸಿದ್ದಾರೆ. ಅವರು ಇಂತಹ ಸಂದೇಶ ರವಾನಿಸಲು ಎರಡು ದಿನಗಳ ಹಿಂದೆ ಅವರ ಕೈ ತಲುಪಿದ ಆಂತರಿಕ ಸರ್ವೇ ಕಾರಣ. ಆ ಸರ್ವೇಯ ಪ್ರಕಾರ ಗೆಲ್ಲುವ ಕ್ಷೇತ್ರಗಳಿಗೆ 'ಎ ಪ್ಲಸ್' ಅಂತ ಹೆಸರಿಸಲಾಗಿದೆ. ಎರಡನೇ ಸ್ಥಾನ ತಲುಪುವ ಸ್ಥಿತಿ ಇರುವ ಕ್ಷೇತ್ರಗಳಿಗೆ 'ಬಿ ಪ್ಲಸ್' ಅಂತ, ಮೂರನೇ ಸ್ಥಾನ ತಲುಪುವ ಕ್ಷೇತ್ರಗಳಿಗೆ 'ಸಿ ಪ್ಲಸ್' ಅಂತ ಹೆಸರಿಡಲಾಗಿದೆ.