Kannada actress Radhika Pandit sister in law gave birth to a baby girl. Radhika Pandit shares baby photo in her FB Account.
ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ತಾತ್ಕಲಿಕವಾಗಿ ನಿಲ್ಲಿಸಿದ್ದ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ಆಗಿತ್ತು. ಆದರೆ ಈಗ ಸ್ವತಃ ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ನಟಿ ರಾಧಿಕ ಪಂಡಿತ್ ಅವರ ಖುಷಿಗೆ ಕಾರಣ ಆಗಿರುವುದು ಈ ಮುದ್ದಾದ ಹೆಣ್ಣು ಕಂದಮ್ಮ. ಅಂದಹಾಗೆ, ರಾಧಿಕಾ ಅವರ ಈ ಫೋಟೋಗಳನ್ನು ನೋಡಿ ಅರೇ ರಾಧಿಕಾ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ರಾ.. ಅಂತ ಯೋಚನೆ ಮಾಡಬೇಡಿ. ಯಾಕಂದ್ರೆ, ರಾಧಿಕಾ ಈಗ ಅಮ್ಮ ಆಗಿಲ್ಲ ಬದಲಿಗೆ ಅತ್ತೆ ಆಗಿದ್ದಾರೆ.