In spite of ill health JDS state president HD Kumaraswamy participating in various meeting around the state. He is preparing for Karnataka assembly elections. There are lot of dream projects for him. Here is an analysis.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಬಗ್ಗೆ ಸಿಟ್ಟಾಗಿದ್ದಾರೆ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಕೋಪಕ್ಕೆ ಕಾರಣವಾಗಿವೆ. ಬಹುತೇಕ ತಾಳ್ಮೆ ಕಾಯ್ದುಕೊಳ್ಳುವ ಎಚ್ ಡಿಕೆ ಯಾಕೆ ಹೀಗೆ ಸಿಟ್ಟಾಗುತ್ತಿದ್ದಾರೆ? ಈಗಲೂ ಪೂರ್ತಿಯಾಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳದ ಕುಮಾರಸ್ವಾಮಿ, ಪಕ್ಷದ ಸಲುವಾಗಿ ರಾಜ್ಯಾದ್ಯಂತ ಸುತ್ತಾಡುತ್ತಿದ್ದಾರೆ. ಇವರು ಹೋದ ಕಡೆ ಜನರು ಕೂಡ ಸೇರುತ್ತಿದ್ದಾರೆ. ಆದರೆ ಸಿಗುತ್ತಿರುವ ಪ್ರಚಾರದ ಪ್ರಮಾಣ ನೋಡಿದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಸಾಕಷ್ಟು ಕಡಿಮೆ ಇದೆ. ವಿವಾದದ ಹೇಳಿಕೆಗಳು ನೀಡಿದಾಗ ಕುಮಾರಸ್ವಾಮಿ ಅವರು ಆಗುವಷ್ಟು ಹೈಲೈಟ್ ತಮ್ಮ ಕನಸಿನ ಬಗ್ಗೆ, ಯೋಜನೆಗಳ ಬಗ್ಗೆ ಮಾತನಾಡುವಾಗ ಆಗುವುದಿಲ್ಲ ಎಂಬುದು ಅವರ ತಕರಾರು.