Bollywood Actress Deepika Padukone's Padmavat cinema faced too many problems before its release. Now Bollywood Actress Kangana Ranaut's Manikarnika faces protests by Brahman group. Sarva Brahman Mahasabha has said the film is based on a foreigner's book and tries to dampen the queen's reputation.
ಕೆಲವು ದಿನಗಳ ಹಿಂದೆಯಷ್ಟೇ ದೀಪಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ ಪದ್ಮಾವತ್ ಸಿನಿಮಾ ವಿವಾದಲ್ಲಿ ಸಿಲುಕಿಕೊಂಡಿದ್ದು. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾ ಸಾಕಷ್ಟು ಹೋರಾಟಗಳ ಮಧ್ಯೆ ತಡವಾಗಿ ತೆರೆಗೆ ಬಂತು. ರಜಪೂತ ಕರಣಿ ಸೇನಾ ಆದೇಶದಂತೆ ಸಿನಿಮಾದ ಶೀರ್ಷಿಕೆಯನ್ನ ಬದಲಾವಣೆ ಮಾಡಿಕೊಂಡಿತ್ತು ಪದ್ಮಾವತ್ ಸಿನಿಮಾತಂಡ. ಸದ್ಯ ವಿವಾದ ಅಂತ್ಯವಾಯಿತು ಇನ್ನು ಮುಂದೆ ಯಾವುದೇ ತೊಂದರೆ ಇಲ್ಲ ಎಂದು ಸಿನಿಮಾತಂಡ ನಿಟ್ಟುಸಿರು ಬಿಟ್ಟಿತ್ತು. ದೀಪಿಕಾ ನಿರಾಳವಾಗುವಷ್ಟರಲ್ಲಿ ಇದೇ ಸಮಸ್ಯೆಗೆ ನಟಿ ಕಂಗನಾ ಸಿಕ್ಕಿ ಹಾಕಿಕೊಂಡಿದ್ದಾರೆ.