ವಾರಾಂತ್ಯ ಆಯ್ತು ಅಂದ್ರೆ ಇಡೀ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಕೂತು ನೋಡುತಿದ್ದ ಕಾರ್ಯಕ್ರಮ ಮಜಾ ಟಾಕೀಸ್. ಕಾರ್ಯಕ್ರಮ ಮುಗಿದು ಹೋದ ತಕ್ಷಣ ಅಭಿಮಾನಿಗಳು ಮತ್ತೆ ಮಜಾ ಟಾಕೀಸ್ ಶುರು ಮಾಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದರು.
ಅಭಿಮಾನಿಗಳ ಅತ್ಯಂತ ಬೇಡಿಕೆಯನ್ನ ಪರಿಗಣಿಸಿ ಕಲರ್ಸ್ ಸೂಪರ್ ನಲ್ಲಿ ಮಜಾ ಟಾಕೀಸ್ ಸೂಪರ್ ಸೀಸನ್ ಶುರುವಾಗುತ್ತಿದೆ. ವಿಭಿನ್ನ ರೀತಿಯ ಪ್ರೋಮೋಗಳನ್ನ ಬಿಡುಗಡೆ ಮಾಡಿರುವ ಮಜಾ ಟಾಕೀಸ್ ತಂಡ ಸೂಪರ್ ಸೀಸನ್ ನ ಮೊದಲ ಎಪಿಸೋಡ್ ಚಿತ್ರೀಕರಣ ಮಾಡಿ ಮುಗಿಸಿದೆ.
ಫೆಬ್ರವರಿ 8 ರಿಂದ ಮಜಾ ಟಾಕೀಸ್ ಸೂಪರ್ ಸೀಸನ್ ಪ್ರಾರಂಭ ಆಗಲಿದ್ದು, ಸೃಜನ್ ಲೋಕೇಶ್ ,ಅಪರ್ಣಾ, ವಿ.ಮನೋಹರ್ , ಇಂದ್ರಜಿತ್ ಲಂಕೇಶ್, ಶ್ವೇತಾ ಚೆಂಗಪ್ಪಾ, ದಯಾನಂದ್, ಪವನ್, ರೇಮೋ, ಮಂಡ್ಯ ರಮೇಶ್ ,ಕುರಿ ಪ್ರತಾಪ್ ಹಾಗೂ ತರಂಗ ವಿಶ್ವ ನಿಮ್ಮೆಲ್ಲರನ್ನು ನಕ್ಕು ನಗಿಸಲಿದ್ದಾರೆ.
Kannada comedy show Maja Talkies Super Season is starting from 8th February. Actor Sharan participated in the program as the first guest of the show. Srujan Lokesh is responsible for the presentation of the program.