ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ 11 ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. ರಿಚರ್ಡ್ ಮಾಡ್ಲೆ ಹರಾಜು ನಡೆಸಿಕೊಡಲಿದ್ದಾರೆ. ಒಟ್ಟಾರೆ 578 ಆಟಗಾರರು (360 ಭಾರತೀಯ) ಜನವರಿ 27ರಂದು ಬೆಂಗಳೂರಿನಲ್ಲಿ ಹರಾಜಿಗೆ ಒಳಪಡಲಿದ್ದಾರೆ. ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ. ಐಪಿಎಲ್ 11ನೇ ಆವೃತ್ತಿಯು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ.
7.6 ಕೋಟಿ ರೂ.ಗೆ ರವಿಚಂದ್ರನ್ ಅಶ್ವಿನ್ ರನ್ನು ಖರೀದಿಸಿದ ಕಿಂಗ್ಸ್ 11 ಪಂಜಾಬ್ ಪಂಜಾಬ್ * ಕಳೆದ ವರ್ಷ ಇಂಗ್ಲೆಂಡ್ ನ ಆಲ್ ರೌಂಡರ್ ಆಟಗಾರ ಬೆನ್ ಸೋಕ್ಸ್ ಅವರನ್ನು 14.5 ಕೋಟಿ ರೂ.ಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಖರೀದಿಸಿತ್ತು. ಇವರು ಅತ್ಯಂತ ದುಬಾರಿ ಆಟಗಾರ ಎನ್ನಿಸಿದ್ದರು. *ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗೌತಮ್ ಗಂಭೀರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದ ಕಾರಣ ಅವರೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2 ಕೋಟಿ ರೂ. ಅವರ ಮೂಲಬೆಲೆ! * ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಹರಾಜಿನ ಬಗ್ಗೆ ಚರ್ಚಿಸುತ್ತಿರುವ ಅನಿಲ್ ಕುಂಬ್ಳೆ, ಜೋನ್ಸ್ ಮತ್ತು ಬದ್ರಿನಾಥ್ * ಈ ಬಾರಿಯ ಹರಾಜಿನಲ್ಲಿ ರವಿಚಂದ್ರನ್ ಅಶ್ವಿನ್ ಅತ್ಯಂತ ದುಬಾರಿ ಆಟಗಾರರಾಗಬಹುದು: ಆಸ್ಟ್ರೇಲಿಯ ಕ್ರಿಕೆಟರ್ ಡೀನ್ ಜೋನ್ಸ್