Rathasapthami is a Hindu festival that falls on the 7th day in the Bright Half (Shukla Paksha) of the Hindu month Maagha. Hindus worship the Sun God, Surya on this day. This year Ratha Sapthami falls on Jan 24th. Watch video to know the significance & importance of the festival.
ಸಪ್ತ ಕುದುರೆಗಳ ರಥವನ್ನೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ, ಹೊರಡುವ ಪರ್ವಕಾಲವೇ ಈ ರಥಸಪ್ತಮಿ. ಜಗದ ಅಧಿನಾಯಕ ಸೂರ್ಯ ರಥಸಪ್ತಮಿ ಹಬ್ಬದ ಕೇಂದ್ರ ಬಿಂದು. ಹಿಂದು ಪಂಚಾಂಗದ ಪ್ರಕಾರ ಮಾಘ ಮಾಸದ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತದೆ. ಈ ವರ್ಷ ಜ.24 ರಂದು ದೇಶದೆಲ್ಲೆಡೆ ರಥಸಪ್ತಮಿ ಆಚರಣೆ ನಡೆಯುತ್ತಿದೆ.
ಉತ್ತಮ ಆರೋಗ್ಯ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಈ ದಿನ ಸೂರ್ಯನನ್ನು ಪೂಜಿಸಲಾಗುತ್ತದೆ. ರಥಸಪ್ತಮಿಯ ನಂತರ ಚಳಿ ಕಡಿಮೆಯಾಗಿ ಬಿಸಿಲಿನ ಪ್ರಖರತೆ ಹೆಚ್ಚುತ್ತದೆ.
ಈ ದಿನ ಸೂರ್ಯೋದಯದ ಸಮಯದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ನೀಡಿದರೆ ಸಕಲ ದುಃಖಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ.
ನವಗ್ರಹಗಳಿಗೆ ಸೂರ್ಯನೆ ಅಧಿಪತಿ. ಸೌರಕೇಂದ್ರ ವ್ಯವಸ್ಥೆಯನ್ನು ವಿಜ್ಞಾನಿಗಳು ಪತ್ತೆ ಮಾಡುವ ಮೊದಲೇ, ಹಿಂದು ಪುರಾಣಗಳಲ್ಲಿ ಅದು ಉಲ್ಲೇಖವಾಗಿತ್ತು.