Former CM of Karnataka and senior BJP leader SM Krishna all set to be active in Karnataka politics. PM Modi and BJP National President Amit Shah coming to Bengaluru on Feb 4 for parties rally, during that party may assign him crucial role in the upcoming Karnataka Assembly Elections 2018.
ಕರ್ನಾಟಕದ ಹೈಪ್ರೊಫೈಲ್ ರಾಜಕಾರಣಿ ಎಸ್ ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಮಾಡಿದ ಸದ್ದು, ಆನಂತರದ ದಿನಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಪ್ರಬುದ್ದ ಮತ್ತು ಉತ್ತಮ ವರ್ಚಸ್ಸಿನ ಮುಖಂಡರೊಬ್ಬರನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿದೆ, ಕಾಂಗ್ರೆಸ್ಸಿನಲ್ಲೇ ಇವರು ಮುಂದುವರಿದಿದ್ದರೆ ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು ಎಂದು ಕಾಂಗ್ರೆಸ್ಸಿನವರು ವ್ಯಂಗ್ಯವಾಡಿದ್ದುಂಟು.
ನವೆಂಬರ್ ಎರಡರಂದು ಆರಂಭವಾದ ಬಿಜೆಪಿಯ ಪರಿವರ್ತನಾ ರ‍್ಯಾಲಿಯಲ್ಲಿ ಎಲ್ಲೂ ಭಾಗವಹಿಸದೇ ಇದ್ದ ಎಸ್ ಎಂ ಕೃಷ್ಣ, ಮಂಡ್ಯ ಜಿಲ್ಲೆಯಲ್ಲಿ ನಡೆದ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ, ಸಕ್ರಿಯ ರಾಜಕಾರಣದಲ್ಲಿ ಮತ್ತೆ ತೊಡಗಿಸಿಕೊಳ್ಳುತ್ತಿದ್ದೇನೆಂದು ಎಂದು ಸಾರುವಂತಿತ್ತು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದರೂ, ಒಂದೆರಡು ಬಾರಿ ಮಾತ್ರ ಅವರನ್ನು ಭೇಟಿ ಮಾಡಿದ್ದ ಕೃಷ್ಣ, ಪ್ರಮುಖವಾಗಿ ಜೆಡಿಎಸ್ ಪ್ರಾಭಲ್ಯವಿರುವ ಭಾಗದಲ್ಲಿ ಮತ್ತೆ 'ಪಾಂಚಜನ್ಯ' ಮೊಳಗಿಸುವ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರು ಕೃಷ್ಣಗೆ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.