ಕಾಶೀನಾಥ್, ಕನ್ನಡದ ಹಿರಿಯ ನಟ ನಿರ್ದೇಶಕ ವಿಧಿವಶ | Filmibeat Kannada

Filmibeat Kannada 2018-01-18

Views 1

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ. ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಟ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಕಾಶಿನಾಥ್ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ವಿಧಿವಶವಾಗಿದ್ದಾರೆ..

ಕಳೆದ ವರ್ಷ ಕಾಶಿನಾಥ್ ಚೌಕಾ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಮಯದಲ್ಲೇ ಕಾಶಿನಾಥ್ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಕಾಶಿನಾಥ್ ಅವರಿಗೆ ಇಬ್ಬರು ಮಕ್ಕಳಿದ್ದು ಮಗ ಅಭಿಮನ್ಯು ಸಿನಿಮಾರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಅನೇಕ ದಿನಗಳಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು ಕಾಶಿನಾಥ್.

'ಚೌಕ' ಸಿನಿಮಾದ ಬಿಡುಗಡೆ ಸಮಯದಲ್ಲೇ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿನಾಥ್ ಚಾಮಾರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನೂ ಮಾಡುತ್ತಾ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು ನಟ ಕಾಶಿನಾಥ್.

ಕಾಶಿನಾಥ್ ಅಗಲಿಕೆ ಕನ್ನಡ ಸಿನಿಮಾರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಸದ್ಯ ಚಿತ್ರರಂಗದ ಗಣ್ಯರು ಶಂಕರ ಆಸ್ಪತ್ರೆಯ ಬಳಿ ಆಗಮಿಸುತ್ತಿದ್ದು ಆಸ್ಪತ್ರೆಯ ಅಧಿಕಾರಿಗಳಿದ ಅಧಿಕೃತವಾಗಿ ಸುದ್ದಿ ಅನೌನ್ಸ್ ಮಾಡಬೇಕಾಗಿದೆ.
Actor Director Kashinath passes away today. Kashinath was suffering from cancer & had got admitted to the hospital from past 2 days.

Share This Video


Download

  
Report form
RELATED VIDEOS