ತಾಯಿಯ ಸಾವಿನಿಂದ ನೊಂದ ಮಗ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಾಜಮಂಗಲದಲ್ಲಿ ನಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ವಾಜಮಂಗಲದ ರತ್ನಮ್ಮ (45) ನಿಧನರಾಗಿದ್ದರು. ತಾಯಿ ಅಗಲಿಕೆ ನೋವಿನಿಂದ ಮಗ ಸತೀಶ್ (29) ಕೂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಸತೀಶ್ ಎರಡೂವರೆ ಗಂಟೆಯ ವಿಡಿಯೋ ರೆಕಾರ್ಡ್ ಮಾಡಿಟಿದ್ದಾರೆ. 'ನನ್ನ ಎಲ್ಲ ಸ್ನೇಹಿತರಿಗೆ ಕಡೆಯ ನಮಸ್ಕಾರಗಳು. ನನ್ನ ತಾಯಿ ತೀರಿಕೊಂಡ ಕಾರಣ ನಾನು ಕೂಡ ಅವರ ಜೊತೆ ಹೋಗಬೇಕೆಂದು ನಿರ್ಧರಿಸಿದ್ದೇನೆ. ಈ ವಿಡಿಯೋ ಮಾಡಲು ಸ್ನೇಹಿತರು ನನ್ನ ಮೇಲೆ ಇಟ್ಟಿರೋ ಪ್ರೀತಿ, ವಿಶ್ವಾಸವೇ ಕಾರಣ. ನಿಮ್ಮಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ನನ್ನ ತಾಯಿಯನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ". ಎಂದು ಹೇಳಿದ್ದಾರೆ .
ನಾಲ್ಕು ಜನರ ಕುಟುಂಬದಲ್ಲಿ ಈಗ ಒಬ್ಬ ಮಗಳಷ್ಟೇ ಬದುಕುಳಿದಿದ್ದಾಳೆ. ಕುಟುಂಬದ ಮೂವರನ್ನು ಕಳೆದುಕೊಂಡ ಮನೆ ಮಗಳ ಗೋಳು ಮುಗಿಲು ಮುಟ್ಟಿದೆ. ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
A boy made a video in depression after her his mother took her last breath due to illness . The boy has later shared the video and hanged himself.