Is Karnataka Assembly elections 2018, campaign will be more on Hindutva rather than development issues. Congress and BJP leaders war of words shows, both the parties will give more prominence to Hindutva.
ಕರ್ನಾಟಕ ಅಸೆಂಬ್ಲಿ ಚುನಾವಣಾ ವರ್ಷದಲ್ಲಿ, ರಾಜಕೀಯ ಜಿದ್ದಾಜಿದ್ದಿನಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ಎರಡು ಪಕ್ಷಗಳ ಅಬ್ಬರದ ನಡುವೆ, ಜೆಡಿಎಸ್ ಯಾಕೋ ಮಂಕಾದಂತಿದೆ.ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎರಡು ಸುತ್ತಿನ ಕರ್ನಾಟಕ ಪ್ರವಾಸದ ನಂತರ, ಯಾವ ವಿಚಾರದ ಮೇಲೆ ಚುನಾವಣಾ ಪ್ರಚಾರ ನಡೆಸಬೇಕು ಎನ್ನುವ ಕಾಂಗ್ರೆಸ್ಸಿನ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿದೆಯಾ? ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದೇವೋ ಅದನ್ನೆಲ್ಲಾ ಪೂರೈಸಿದ್ದೇವೆ, ನಮಗೆ ಕೂಲಿ ಕೊಡಿ ಎಂದು ಸಾಧನಾ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯನವರು, ಸದ್ಯ ಹಿಂದುತ್ವ, ಬಿಜೆಪಿ, RSS ಸುತ್ತ ತಮ್ಮ ಹೇಳಿಕೆಯನ್ನು ಕೇಂದ್ರೀಕರಿಸುತ್ತಿದ್ದಾರೆ. ಜೊತೆಗೆ, ಕಾಂಗ್ರೆಸ್ ಮುಖಂಡರೂ 'ಹಿಂದುತ್ವದ' ವಿಚಾರದಲ್ಲೇ ಗಿರಿಗಿಟ್ಲೆಯಾಡುತ್ತಿದ್ದಾರೆ.ಬಿಜೆಪಿ ಮತ್ತು RSSಗೆ ಸಿದ್ದರಾಮಯ್ಯ 'ಉಗ್ರ' ಪಟ್ಟಕೊಟ್ಟ ನಂತರ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಮುಖ್ಯಮಂತ್ರಿಗಳು ಒಮ್ಮೆ Uಟರ್ನ ಹೊಡೆದು, ನಂತರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಭಯೋತ್ಪಾದಕರು ನಮ್ಮನ್ನು ಜೈಲಿಗೆ ಅಟ್ಟಿ, ಇಲ್ಲಾಂದ್ರೆ ಕ್ಷಮೆ ಕೇಳಿ ಎಂದು ಸಿಎಂ ಈ ಹೇಳಿಕೆಯ ವಿಚಾರಕ್ಕೆ ಬಿಜೆಪಿಯವರು ಮತ್ತಷ್ಟು ಜೀವ ತುಂಬುತ್ತಿದ್ದಾರೆ.