ಬಹುಭಾಷಾ ನಟಿ ಪ್ರಿಯಾಮಣಿ ಕಳೆದ ವರ್ಷದ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜಯನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಳವಾಗಿ ಮುಸ್ತಾಫ್ ರಾಜ್ ಅವರೊಂದಿಗೆ ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಆರಂಭಿಸಿರುವ ಪ್ರಿಯಾಮಣಿ ಈಗ ರಾಜಕೀಯಕ್ಕೆ ಧುಮುಕಿದ್ದಾರೆ.ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರೋದು ವಿಶೇಷವೇನು ಅಲ್ಲ. ಈಗಾಗಲೇ ರಮ್ಯಾ, ಅಂಬರೀಷ್, ಜಗ್ಗೇಶ್, ರಕ್ಷಿತಾ, ಶ್ರುತಿ, ಪೂಜಾ ಗಾಂಧಿ, ತಾರಾ, ಮಾಳವಿಕ ಅವಿನಾಶ್, ಶಿಲ್ಪಾ ಗಣೇಶ್, ಗೀತಾ ಶಿವರಾಜ್ ಕುಮಾರ್, ಜಯಮಾಲ ಸೇರಿದಂತೆ ಹಲವರು ನಟ-ನಟಿಯರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ.ಇದೀಗ, ಬಹುಭಾಷಾ ನಟಿ ಪ್ರಿಯಾಮಣಿ ಈಗ ಹೊಸದಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಜನಶಕ್ತಿ ಪಕ್ಷದಿಂದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಷ್ಟಕ್ಕೂ, ಪ್ರಿಯಾಮಣಿ ರಾಜಕೀಯಕ್ಕೆ ಬರೋದು ನಿಜಾನ? ಯಾವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ? ಏನಿದು ಪ್ರಿಯಾ ಬಗ್ಗೆ ಹೊಸ ಸುದ್ದಿ