ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ, ಆಕ್ಷನ್ ಕಿಂಗ್ ಧ್ರುವ ಸರ್ಜಾ ನಂತರ ಈಗ ಸರ್ಜಾ ಕುಟುಂಬದ ಮತ್ತೊಂದು ಕುಡಿ ಪವನ್ ತೇಜ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಅಥರ್ವ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಪವನ್ ತೇಜಗೆ ಸಹೋದರ ಧ್ರುವ ಸ್ವಾಗತ ಕೋರಿದ್ದಾರೆ. 'ಅಥರ್ವ' ಟೀಸರ್ ನೋಡಿರುವ ಧ್ರುವ ಚಿತ್ರದ ಬಗ್ಗೆ ಪವನ್ ತೇಜ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ''ಟೀಸರ್ ನೋಡಿ ತುಂಬ ಖುಷಿ ಆಯ್ತು. ಯಾಕಂದ್ರೆ, ಚಿತ್ರದ ನಾಯಕ ಪವನ್ ತೇಜ ನನ್ನ ಸಹೋದರ. ತುಂಬ ಚೆನ್ನಾಗಿ ಕಾಣ್ತಾನೆ. ಪಾಸಿಟೀವ್ ಅಂಶ ಕಾಣ್ತಿದೆ. ನೀವೆಲ್ಲರೂ ನೋಡಿ ಪ್ರೋತ್ಸಾಹಿಸಬೇಕು'' ಎಂದು ಶುಭಕೋರಿದ್ದಾರೆ. ಅಂದ್ಹಾಗೆ, ಪವನ್ ತೇಜ, ಅರ್ಜುನ್ ಸರ್ಜಾ ಅವರ ತಂಗಿ ಮಗ .
New member of the sarja family is all set to enter Kannada film Industry after Arjun Sarja , chiranjeevi sarja and Dhruva sarja with all training required.