ರಿಷಬ್ ಶೆಟ್ಟಿ 'ಬೆಲ್ ಬಾಟಮ್' ಚಿತ್ರಕ್ಕೆ ನಾಯಕ | Filmibeat Kannada

Filmibeat Kannada 2018-01-10

Views 350

ಕಳೆದ ವರ್ಷ 'ಬ್ಯೂಟಿಫುಲ್ ಮನಸುಗಳು' ಚಿತ್ರದ ಮೂಲಕ ಸೂಪರ್ ಯಶಸ್ಸು ಕಂಡಿದ್ದ ನಿರ್ದೇಶಕ ಜಯತೀರ್ಥ ನಂತರ 'ವೆನಿಲ್ಲಾ' ಎಂಬ ಹೊಸಬರ ಸಿನಿಮಾ ಶುರು ಮಾಡಿದ್ದರು. ಈಗಾಗಲೇ ಚಿತ್ರೀಕರಣ ಮುಗಿಸಿರುವ 'ವೆನಿಲ್ಲಾ' ಬಿಡುಗಡೆಗೆ ಸಿದ್ದವಾಗಿದೆ. ಈ ಮಧ್ಯೆ ಜಯತೀರ್ಥ ತಮ್ಮ ಹೊಸ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರಕ್ಕೆ ನಿರ್ದೇಶಕ ರಿಷಬ್ ಶೆಟ್ಟಿ ನಾಯಕ. 'ರಿಕ್ಕಿ', 'ಕಿರಿಕ್ ಪಾರ್ಟಿ' ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಈಗ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೂಲತಃ ನಟನಾಗಿದ್ದ ರಿಷಬ್ ಶೆಟ್ಟಿ ನಂತರ ನಿರ್ದೇಶಕರಾಗಿದ್ದರು. ಈಗ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು, ನಾಯಕ ಎಂಬ ಪಟ್ಟ ಅಲಂಕರಿಸುತ್ತಿದ್ದಾರೆ. ಅಂದ್ಹಾಗೆ, ಜಯತೀರ್ಥ ನಿರ್ದೇಶನ ಮಾಡಲಿರುವ ಹೊಸ ಚಿತ್ರದ ಟೈಟಲ್ ಏನೆಂದು ಗುರುತಿಸಲು ವಿಭಿನ್ನವಾದ ಪೋಸ್ಟರ್ ಡಿಸೈನ್ ಮಾಡಲಾಗಿದ್ದು, ಚಿತ್ರದ ಹೆಸರನ್ನ ಕಂಡುಹಿಡಿಯಲು ಜನರಿಗೆ ಸವಾಲು ನೀಡಲಾಗಿದೆ.

Director of the sensational hit movie Kirik Party is going to play a lead role in a movie called bell bottom

Share This Video


Download

  
Report form
RELATED VIDEOS