Is astrology Science or fake? Here is an interview of well known astrologer Kabyadi Jayaramacharya. He explains astrology impact on human being scientifically. Here is the PM Narendra Modi, MP Pratap Simha, AICC president Rahul and Priyanka horoscope analysis according to Vedic astrology by well known astrologer Kabiyadi Jayaramacharya. Watch Video.
"ಪ್ರಧಾನಿ ನರೇಂದ್ರ ಮೋದಿ ಅವರ ಜಾತಕದಲ್ಲಿ ಹಲವಾರು ಯೋಗಗಳಿವೆ. ಇನ್ನೂ ಏಳು ವರ್ಷ ಅಂದರೆ 2024ರ ವರೆಗೆ ಅವರ ಅಧಿಕಾರಕ್ಕೆ ಯಾವುದೇ ತೊಂದರೆ ಇಲ್ಲ. ಇನ್ನು ಅವರ ಆರೋಗ್ಯ, ಆಯುಷ್ಯದ ಬಗ್ಗೆ ಟಿವಿಗಳಲ್ಲಿ ಹೇಳುತ್ತಿರುವ ಜ್ಯೋತಿಷ್ಯವೆಲ್ಲ ಶುದ್ಧ ಸುಳ್ಳು. ಬೇಕಿದ್ದರೆ ಬರೆದಿಟ್ಟುಕೊಳ್ಳಿ: ಕನಿಷ್ಠ ಎಂಬತ್ತೊಂದು ವರ್ಷ ಅವರ ಆಯುಷ್ಯ- ಆರೋಗ್ಯ ಚೆನ್ನಾಗಿರುತ್ತದೆ". -ಹೀಗೆಂದವರು ಜ್ಯೋತಿಷಿಗಳಾದ ಕಬ್ಯಾಡಿ ಜಯರಾಮಾಚಾರ್ಯ. ಈಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಜಾತಕ ರೀತ್ಯಾ ಗಂಡಾಂತರ ಇದೆ ಎಂದು ವಿವಿಧ ಜ್ಯೋತಿಷಿಗಳು ಹೇಳುತ್ತಿರುವ ಎಚ್ಚರಿಕೆಯ ಮಾತುಗಳ ಬಗ್ಗೆ ಲಘು ದಾಟಿಯಲ್ಲಿ ಉತ್ತರಿಸಿದ ಅವರು, ಮೋದಿ ಜಾತಕದಲ್ಲಿ ಚಕ್ರವರ್ತಿ ಆಗುವಂಥ ಯೋಗವಿದೆ. ಮತ್ತು ಶುಭ ಯೋಗಗಳು ಹಾಗೂ ಮಹಾ ಯೋಗಗಳು ಎಂದು ಪರಿಗಣಿಸುವುದು ಬಹಳ ಇವೆ ಎಂದರು.ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಭವಿಷ್ಯ ನುಡಿದ ಅವರು, ಮೋದಿ ಅವರಿಗೆ ಗಂಡಾಂತರ ಇದೆ ಎಂದು ಭವಿಷ್ಯ ನುಡಿಯುತ್ತಾ ಕೂತವರನ್ನು ನೋಡಿದಾಗ ನಖಶಿಖಾಂತ ಸಿಟ್ಟು ಬರುತ್ತದೆ ಎಂದರು.